ಹದಗೆಟ್ಟ ಬೀದರ್-ಔರಾದ್ ಹೆದ್ದಾರಿಯಲ್ಲಿ ಪ್ರಯಾಣಿಕರ ಪರದಾಟ... ಪ್ರತ್ಯಕ್ಷ ವರದಿ - ಹದಗೆಟ್ಟ ಬೀದರ್ ರಸ್ತೆ ಸುದ್ದಿ
ನಾಂದೇಡ್-ಬೀದರ್ ಸಂಪರ್ಕ ಕಲ್ಪಿಸುವ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ತುಂಬೆಲ್ಲಾ ಗುಂಡಿಗಳು ಆವರಿಸಿಕೊಂಡಿವೆ. ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ಈ ಹೆದ್ದಾರಿ ಸಂಪೂರ್ಣವಾಗಿ ಗುಂಡಿಗಳ ಸ್ವರೂಪ ಪಡೆದುಕೊಂಡಿದ್ದು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಭಾರತ ಮಾಲಾ ಯೋಜನೆ ಅಡಿಯಲ್ಲಿ 336 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೆದ್ದಾರಿ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿಕೊಂಡು ಟೆಂಡರ್ ಕೂಡ ಕರೆದಿತ್ತು. ಆದ್ರೆ ತಾಂತ್ರಿಕ ಕಾರಣದಿಂದ ಟೆಂಡರ್ ಪ್ರಗತಿಯಾಗದೆ ಒಂದು ವರ್ಷದಿಂದ ಯೋಜನೆ ಮೂಲೆಗುಂಪಾಗಿದೆ. ಇದರಿಂದಾಗಿ ಹದಗೆಟ್ಟ ರಸ್ತೆ ದುರಸ್ತಿ ಕೆಲಸ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಮಾಡಬೇಕು. ಆದರೆ ಇಲಾಖೆಯೂ ಇತ್ತ ಹಮನ ಹರಿಸದೆ ಬೀದರ್-ಔರಾದ್ ಸಂಚಾರ ಮಾರ್ಗ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.