ಮನುಷ್ಯನ ಹಪಾಹಪಿಗೆ ಮಾಯವಾಗಿದೆ ಗುಬ್ಬಿಗಳ ಚಿಲಿಪಿಲಿ ನಿನಾದ! - no sparrow
ಮಂಗಳೂರು: ಮಾರ್ಚ್ 20ನ್ನು ವಿಶ್ವ ಗುಬ್ಬಚ್ಚಿ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ಇಂದು ನಗರದಲ್ಲಿ ಎಲ್ಲಿ ಹುಡುಕಿದರೂ ಗುಬ್ಬಚ್ಚಿಯ ಸುಳಿವಿಲ್ಲ. 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಎನ್ನುವ ಹಾಗೆ ಮಾನವನ ಆಧುನಿಕ ಜೀವನ ಶೈಲಿ, ಅಭಿವೃದ್ಧಿಯ ಹಪಹಪಿ ಗುಬ್ಬಿ ಎಂಬ ಪುಟ್ಟ ಪಕ್ಷಿಯ ಅಸ್ತಿತ್ವವನ್ನೇ ನಾಶಗೊಳಿಸುತ್ತಿದೆಯೋ ಎಂಬ ಜಿಜ್ಞಾಸೆ ಮೂಡಿಸುತ್ತಿದೆ. ಗುಬ್ಬಚ್ಚಿ ಇಂದು ನಗರ ಬೆಳೆದ ಸ್ಥಿತಿಗೆ ಬೆದರಿ ಹಳ್ಳಿಯತ್ತ ಮುಖ ಮಾಡಿರುವುದರಿಂದ ನಗರದಲ್ಲೆಲ್ಲೂ ಗುಬ್ಬಚ್ಚಿಯ ಸುಳಿವೇ ಇಲ್ಲ. ನಗರದ ಇಂದಿನ ಮಕ್ಕಳು ಗುಬ್ಬಚ್ಚಿಯನ್ನು ಕೇವಲ ಚಿತ್ರದಲ್ಲೇ ನೋಡುವ ಪರಿಸ್ಥಿತಿ ಇದೆ. ವಿಶ್ವ ಗುಬ್ಬಚ್ಚಿ ದಿನದ ಹಿನ್ನೆಲೆಯಲ್ಲಿ ಗುಬ್ಬಚ್ಚಿ ಕುರಿತು ಈ ವಿಶೇಷ ವರದಿ.