ಕರ್ನಾಟಕ

karnataka

ETV Bharat / videos

ವಿಶ್ವ ಏಡ್ಸ್ ದಿನಾಚರಣೆ : ಸಾರ್ವಜನಿಕರಿಗೆ ಅರಿವು ಮೂಡಿಸಲು ತುಮಕೂರಿನಲ್ಲಿ ಜಾಥಾ - ತುಮಕೂರು ಲೆಟೆಸ್ಟ್ ಜಾಥಾ

By

Published : Dec 1, 2019, 8:28 PM IST

ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಹೆಚ್ಐವಿ ಅಥವಾ ಏಡ್ಸ್ ಅನ್ನು ಸೊನ್ನೆಗೆ ತನ್ನಿ ಎಂಬ ಘೋಷಣೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕರಾದ ಮೋಹನ ಕುಮಾರಿ, ಎಚ್ಐವಿ ಸೋಂಕಿತರಿಗೆ ತಾರತಮ್ಯ ಮಾಡುವುದು, ಕಳಂಕ ರೀತಿಯಲ್ಲಿ ಅವರನ್ನು ನಡೆಸಿಕೊಳ್ಳುವುದು ಕಂಡುಬಂದರೆ ಅಂತವರಿಗೆ 2 ವರ್ಷ ಜೈಲು ಶಿಕ್ಷೆ ನೀಡಲಾಗುವುದು ಅಥವಾ ಒಂದು ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದರು.

ABOUT THE AUTHOR

...view details