ಕರ್ನಾಟಕ

karnataka

ETV Bharat / videos

ಕೂಲಿ ಹಣ ಪಾವತಿಗೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ - ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು

By

Published : Mar 2, 2020, 4:18 PM IST

ಕೊಪ್ಪಳ: ಕೂಲಿ ಹಣ ಪಾವತಿಸುವಂತೆ ಒತ್ತಾಯಿಸಿ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ತಾಲೂಕಿನ ಬುದುಗುಂಪ ಹಾಗೂ ಹುಲಗಿ ಗ್ರಾಮದಲ್ಲಿ ಕಾರ್ಮಿಕರು ನಗರದ ತಾಲೂಕು ಪಂಚಾಯತ್​ ಮುಂದೆ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯತ್​ ಪಿಡಿಒ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಟಿವಿ ಭಾರತನೊಂದಿಗೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಬಸವರಾಜ್​, ಸಮರ್ಪಕವಾಗಿ ಕೂಲಿ ಹಣ ಪಾವತಿಸದೆ ಇರುವುದರಿಂದ ಜನರು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೂಲಿ ಹಣ ಪಾವತಿಸಿ ಸಮರ್ಪಕ ಕೆಲಸ ನೀಡಬೇಕೆಂದು ಒತ್ತಾಯಿಸಿದರು.

ABOUT THE AUTHOR

...view details