ಆಂಧ್ರಗಡಿಯಿಂದ ತುಮಕೂರಿಗೆ ನುಸುಳುತ್ತಿರುವ ಕಾರ್ಮಿಕರು.. ಜಿಲ್ಲಾಡಳಿತಕ್ಕೆ ಭಾರಿ ತಲೆಬೇನೆ - ತುಮಕೂರು
ಪಾವಗಡ, ಮಧುಗಿರಿ ತಾಲೂಕಿನ ಹಳ್ಳಿಗಳಿಗೆ ಆಂಧ್ರಪ್ರದೇಶದ ಅನೇಕ ಮಂದಿ ಬಂದು ಸೇರಿಕೊಳ್ಳುತ್ತಿದ್ದಾರೆ. ಅಂಥವರನ್ನು ಪತ್ತೆಹಚ್ಚಿ ಕ್ವಾರಂಟೈನ್‌ನಲ್ಲಿರಿಸುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಕೆಲಸ. ಗಡಿಭಾಗದಲ್ಲಿ ತೀವ್ರ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಇದ್ದರೂ ಕಣ್ತಪ್ಪಿಸಿ ಅನಂತಪುರ ಜಿಲ್ಲೆಯ ಬಹುತೇಕ ಮಂದಿ ರಾಜ್ಯದ ಗಡಿಯಲ್ಲಿ ನುಸುಳುತ್ತಿದ್ದಾರೆ. ಮೇ 1ರಿಂದ ಈವರೆಗೂ 2,711 ಮಂದಿ ಹೊರ ಜಿಲ್ಲೆಯಿಂದ ತುಮಕೂರಿಗೆ ಬಂದಿದ್ದಾರೆ. ಹೊರ ರಾಜ್ಯದಿಂದ ಬಂದ 289 ಜನರಲ್ಲಿ ಹೆಚ್ಚಿನವರು ಆಂಧ್ರದವರೇ ಆಗಿದ್ದಾರೆ.