ಹೊಟ್ಟೇಗ್ ಅನ್ನ ತಿನ್ನೋದಾ ಇಲ್ಲ ಮಣ್ಣಾ.. ಸಿಲಿಂಡರ್ ಬೆಲೆ ಏರಿಸಿದ ಕೇಂದ್ರದ ವಿರುದ್ಧ ಮಹಿಳೆಯರ ಕಿಡಿ.. - ಅಗತ್ಯ ವಸ್ತುಗಳ ಬೆಲೆ ಏರಿಕೆ
ಮೈಸೂರು : ದಿನೇದಿನೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ಜನಸಾಮಾನ್ಯರ ಸಹನೆಯ ಕಟ್ಟೆ ಒಡೆದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಬೆನ್ನಲೇ ಅಡುಗೆ ಎಣ್ಣೆ, ಸಿಲಿಂಡರ್ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ನಿದ್ದೆಗೆಡಿಸಿದೆ. ಬೆಲೆ ಏರಿಕೆಯಿಂದ ಬೇಸತ್ತ ಜನಸಾಮಾನ್ಯರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.