ಲಾಕ್ಡೌನ್ ಆದೇಶದ ನಡುವೆಯೂ ಹಾಲು,ದಿನಸಿಗಾಗಿ ಮಹಿಳೆಯರ ಪ್ರತಿಭಟನೆ - ದಿನಸಿ ನೀಡುವಂತೆ ಮಹಿಳೆಯರ ಪ್ರತಿಭಟನೆ
ಪಡಿತರ, ಹಾಲು ನೀಡುವಂತೆ ಒತ್ತಾಯಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ನಗರ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ದೇಶದಲ್ಲಿ ಲಾಕ್ಡೌನ್ ಆದೇಶ ಜಾರಿಯಲ್ಲಿದ್ರೂ ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯ ಮಹಿಳೆಯರು ಸರ್ಕಾರದ ಆದೇಶ ಧಿಕ್ಕರಿಸಿ ಮುಖಕ್ಕೆ ಸೀರೆಯ ಸೆರಗು ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬಡವರಿಗೆ ಉಚಿತ ಹಾಲು ನೀಡಬೇಕು ಎಂದು ಆದೇಶ ಮಾಡಿದೆ, ಆದ್ರೆ ನಮಗೆ ಹಾಲು ನೀಡುತ್ತಿಲ್ಲ ಎಂದು ಇದೇ ವೇಳೆ ಆರೋಪಿಸಿದರು.