ಎಣ್ಣೆ ಅಂಗಡಿ ಬದಲು ಪೂಜಾ ಕೇಂದ್ರಗಳ ತೆರೆಯಿರಿ, ಊಟದ ವ್ಯವಸ್ಥೆ ಮಾಡಿ: ಸರ್ಕಾರದ ವಿರುದ್ಧ ಮಹಿಳೆಯ ಆಕ್ರೋಶ - women-outage-on-wine-store-opening
ಬೆಂಗಳೂರಿನಲ್ಲಿ ಅನೇಕ ಮಹಿಳೆಯರು ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮದ್ಯದಂಗಡಿ ತೆರೆದು ಸರ್ಕಾರದವ್ರು ಮಹಿಳೆಯರು ಬೀದಿಗೆ ಬರುವಂತೆ ಮಾಡ್ತಿದ್ದಾರೆ. ಇದಕ್ಕೆ ಬದಲು ದೇವಸ್ಥಾನ, ಮಸೀದಿ ತೆರೆಯಬೇಕಿತ್ತು. ಮತ್ತು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕಿತ್ತು. ಹೀಗೆ ಮಾಡಿದರೆ ನೆಮ್ಮದಿ ಇರುತ್ತದೆ. ಆದ್ರೆ ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿರುವುದರ ಪರಿಣಾಮ ಬಹಳಷ್ಟು ಕುಟುಂಬಗಳು ಬೀದಿಗೆ ಬರ್ತವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.