ಉಸಿರಾಟ ತೊಂದರೆಯಿಂದ ಮಹಿಳೆ ನರಳಾಟ... ಆ್ಯಂಬುಲೆನ್ಸ್ಗೆ ಪರದಾಡಿದ ಮನಕಲಕುವ ವಿಡಿಯೋ ವೈರಲ್ - viral video
ಬೆಂಗಳೂರು: ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಆ್ಯಂಬುಲೆನ್ಸ್ಗೆ ಕಾಯುತ್ತಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ನಿನ್ನೆ ಸಂಜೆ ನಗರದ ವೈಟ್ ಫೀಲ್ಡ್ ಬಳಿ ಇರುವ ವಿಶಾಲ್ ಮಾರ್ಟ್ ಸಮೀಪ ಮಹಿಳೆಗೆ ಉಸಿರಾಟದ ಸಮಸ್ಯೆ ಕಂಡು ಬಂದಿದೆ. ತಕ್ಷಣ ಕುಟುಂಬಸ್ಥರು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದರು. ಆದರೆ ಗಂಟೆಗಟ್ಟಲೇ ಕಾದರೂ ಆ್ಯಂಬುಲೆನ್ಸ್ ಬಾರದೇ ಇದ್ದುದನ್ನು ನೋಡಿದ ಸ್ಥಳೀಯರು ಆ ಮಹಿಳೆಯನ್ನು ಆಟೋ ಹತ್ತಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಗ್ಯ ಇಲಾಖೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.