ಕರ್ನಾಟಕ

karnataka

ETV Bharat / videos

ವೇತನ ನೀಡದ್ದಕ್ಕೆ ಆಕ್ರೋಶ.. ವಿಸ್ಟ್ರನ್‌ ಕಂಪನಿ ಜಖಂಗೊಳಿಸಿದ ಕಾರ್ಮಿಕರು- ವಿಡಿಯೋ - ವಿಸ್ಟ್ರನ್​​ ​​ ಕಂಪೆನಿ ಲೇಟೆಸ್ಟ್​ ನ್ಯೂಸ್​

By

Published : Dec 12, 2020, 1:58 PM IST

Updated : Dec 12, 2020, 2:12 PM IST

ವೇತನ ನೀಡದ ಕಾರಣ ಆಕ್ರೋಶಗೊಂಡ ಕೋಲಾರ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರನ್​​​ ಐ-ಫೋನ್​ ಮೊಬೈಲ್​ ತಯಾರಿಕಾ ಕಂಪನಿ‌ಯ ಕಾರ್ಮಿಕರು, ಕಂಪನಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಕಂಪನಿಯಲ್ಲಿದ್ದ ಬೆಲೆಬಾಳುವ ಐಫೋನ್, ಲ್ಯಾಪ್​​ಟಾಪ್ ಸೇರಿ ಸಾಕಷ್ಟು ಉಪಕರಣಗಳನ್ನು ಚೂರು ಚೂರು ಮಾಡಿದ್ದಾರೆ. ಕೆಲ ವಸ್ತುಗಳನ್ನು ಹೊತ್ಕೊಂಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೈವಾನ್​ ಮೂಲದ ವಿಸ್ಟ್ರನ್​​ ಕಂಪನಿಯಲ್ಲಿ ಸುಮಾರು 11 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಕಂಪನಿಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳಿಗಳನ್ನೆಲ್ಲಾ ಜಖಂಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ. ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಜೊತೆಗೆ ಕಂಪನಿಯ 2 ಕಾರು ಸೇರಿ ಹೊರಗೆ ಪಾರ್ಕ್​ ಮಾಡಿದ್ದ 4 ಕಾರುಗಳಿಗೆ ಹಾನಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರವಲಯ ಐಜಿ ಸೀಮಂತ್ ಕುಮಾರ್ ಸಿಂಗ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Last Updated : Dec 12, 2020, 2:12 PM IST

ABOUT THE AUTHOR

...view details