ಉಡುಪಿಯಲ್ಲೂ ಮದ್ಯ ಖರೀದಿ ಜೋರು; ಅಂತರ ಕಾಪಾಡಿಕೊಂಡ ಜನರು - ಮದ್ಯದಂಗಡಿ
ಹಸಿರು ವಲಯವೆಂದು ಘೋಷಣೆಯಾದ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ಜನಸಂಚಾರ ಓಡಾಟ ಮಾಮೂಲಿಯಂತಾಗಿದೆ. ಮದ್ಯಪ್ರಿಯರು ಮದ್ಯ ಖರೀದಿಸಲು ಸಾಲಿನಲ್ಲಿ ನಿಂತ್ರೆ, ಕೆಲವೊಂದು ಮದ್ಯದಂಗಡಿಗಳಲ್ಲಿ ಜನರ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಎಣ್ಣೆ ಸಿಗೋ ಖುಷಿಯಲ್ಲಿ ಜನತೆ ಉರಿ ಬಿಸಿಲು ಲೆಕ್ಕಿಸದೆ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ವಾಕ್ ಥ್ರೂ ನಡೆಸಿದ್ದಾರೆ, ವೀಕ್ಷಿಸಿ