ಕೊಡಗು: ರಾಜಾರೋಷವಾಗಿ ರಸ್ತೆ ದಾಟಿದ ಕಾಡಾನೆಗಳ ಹಿಂಡು - ವಿರಾಜಪೇಟೆ ಲೆಟೆಸ್ಟ್ ನ್ಯೂಸ್
ವಿರಾಜಪೇಟೆ(ಕೊಡಗು): ತಾಲೂಕಿನ ಸಿದ್ದಾಪುರದ ಗುಹ್ಯ ಗ್ರಾಮದ ಮುಖ್ಯ ರಸ್ತೆಯಲ್ಲಿ ಮರಿ ಸೇರಿದಂತೆ ಏಳು ಕಾಡಾನೆಗಳ ಹಿಂಡೊಂದು ರಸ್ತೆ ದಾಟುತ್ತಿದ್ದ ವಿಡಿಯೋ ವೈರಲ್ ಆಗಿದೆ. ಕಳೆದ ಹಲವು ತಿಂಗಳಿಂದ ಕಾಡಾನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಕಾಡಾನೆಗಳ ಸಮಸ್ಯೆ ಇವತ್ತು ನಿನ್ನೆಯದಲ್ಲ. ಹಲವು ವರ್ಷಗಳಿಂದ ನಿರಂತರವಾಗಿ ಇರುವಂತಹ ಸಮಸ್ಯೆಯಾಗಿದೆ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.