ಕರ್ನಾಟಕ

karnataka

ETV Bharat / videos

ಗಂಗಾವತಿ : ತಹಶೀಲ್ದಾರ್ ಕಚೇರಿ ಸಮೀಪ ಜಾಂಬವಂತ ಪ್ರತ್ಯಕ್ಷ! - bear found in gangavathi latest news

By

Published : Dec 14, 2020, 10:04 AM IST

Updated : Dec 14, 2020, 10:17 AM IST

ಗಂಗಾವತಿ ನಗರದ ತಹಶೀಲ್ದಾರ್ ಕಚೇರಿ ಸಮೀಪ ಸುಮಾರು ಐದು ಅಡಿ ಎತ್ತರದ ಕರಡಿಯೊಂದು ಪ್ರತ್ಯಕ್ಷವಾಗಿದೆ. ಗಂಗಾವತಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮೊದಲ ಹಂತದ ನೀರಿನ ಘಟಕ ಜಾಕ್ವೆಲ್ ಬಳಿಯ ಬೆಟ್ಟದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಬೆಟ್ಟದ ಸಮೀಪದ ಪೊದೆಗಳಿಂದ ಹೊರಕ್ಕೆ ಬಂದ ಕರಡಿಯ ದೃಶ್ಯವನ್ನ ಸ್ಥಳೀಯ ಯುವಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಬೆಟ್ಟದ ಕೆಳಗೆ ಇರುವ ಜನವಸತಿ ಪ್ರದೇಶಕ್ಕೆ ಕರಡಿ ಬಾರದಂತೆ ತಡೆಯಲು ನಾಲ್ಕಾರು ಜನ ಸೇರಿ ದೊಡ್ಡ ಸದ್ದು ಮಾಡಿ ಕರಡಿ ಓಡಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆರ್​​ಎಫ್​ಒ ಶಿವರಾಜ ಮೇಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ರು.
Last Updated : Dec 14, 2020, 10:17 AM IST

ABOUT THE AUTHOR

...view details