ಯಾರು ಏನ್ ಹೇಳಿದ್ರೂ ನಮ್ಮದು ಅಖಂಡ ಕರ್ನಾಟಕ : ಸಚಿವ ಶ್ರೀಮಂತ ಪಾಟೀಲ - belagavi uddhava takre statement
ಚಿಕ್ಕೋಡಿ : ಯಾರು ಏನ್ ಹೇಳಿದ್ರೂ ನಮ್ಮದು ಅಖಂಡ ಕರ್ನಾಟಕ ಎಂದು ಮರಾಠಿ ಸಮುದಾಯಕ್ಕೆ ಸೇರಿದ ಕರ್ನಾಟಕ ಅಲ್ಪಸಂಖ್ಯಾತ ಮತ್ತು ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ವಿರುದ್ದ ಗುಡುಗಿದರು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ದುರುದ್ದೇಶದಿಂದ ಉದ್ದವ್ ಠಾಕ್ರೆ ಉದ್ದಟತನದ ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಪರಿಗಣಿಸಬೇಕಾಗಿಲ್ಲ ಎಂದರು.