ಬೆಂಗಳೂರಿನ ಈ ನಾಲ್ಕು ಕ್ಷೇತ್ರಗಳಲ್ಲಿ ಯಾರಿಗೆ ಒಲಿಯುತ್ತಾಳೆ ವಿಜಯಲಕ್ಷ್ಮಿ? - bangalore news
ಉಪ ಚುನಾವಣೆಯಿಂದಾಗಿ ಬೆಂಗಳೂರಿನ ಹೊಸಕೋಟೆ ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ,ಯಶವಂತಪುರದಲ್ಲಿ ಎಲ್ಲ ಪಕ್ಷಗಳ ಹುರಿಯಾಳುಗಳು ಮತಬೇಟೆಯಲ್ಲಿ ತೊಡಗಿದ್ದಾರೆ. ಆಯಾ ಪಕ್ಷಗಳ ಹಿರಿಯ ನಾಯಕರೊಂದಿಗೆ ಬಂದ ಅಭ್ಯರ್ಥಿಗಳು ಮತಯಾಚನೆ ಮಾಡಿದ್ದಾರೆ. ಆಯಾ ಸಮುದಾಯಗಳನ್ನು ಮೆಚ್ಚಿಸಲು ಭರ್ಜರಿ ತಾಲೀಮು ಸಹ ನಡೆಸಿದ್ದಾರೆ. ಆದರೆ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಕುತೂಹಲ ಮೂಡಿಸಿದೆ.