ಆನೆ ಸ್ಥಳಾಂತರ 'ಗಜ'ಪ್ರಸವ.. ರಾತ್ರೋರಾತ್ರಿ ಉಡುಪಿಯ 'ಸುಭದ್ರೆ' ಎಲ್ಲಿ ಹೋದಳು? - ಉಡುಪಿ ಶ್ರೀಕೃಷ್ಣ ಮಠದ ಆನೆ
ಹೆಚ್ಚು ಕಮ್ಮಿ ಎರಡು ದಶಕದಿಂದ ಉಡುಪಿಯ ಶ್ರೀ ಕೃಷ್ಣಮಠದಲ್ಲಿದ್ದ ಸುಭದ್ರೆಯನ್ನ ರಾತ್ರೋರಾತ್ರಿ ಬೇರೆಡೆ ಸಾಗಿಸಲಾಗಿದೆ. ಆದರೆ ಅದಕ್ಕೂ ಮುನ್ನ ಮಠವನ್ನು ಬಿಟ್ಟು ಹೋಗಲಾಗದೆ ಹಠ ಹಿಡಿದಿದ್ದ ಆನೆಯನ್ನು ನಾಲ್ವರು ಮಾವುತರು ಸತತ ಪ್ರಯತ್ನ ನಡೆಸಿ ನಸುಕಿನ ಜಾವ 3 ಗಂಟೆಗೆ ಲಾರಿ ಮೇಲೇರುವಂತೆ ಮಾಡಿದ್ದಾರೆ. ಕಡೆಗೂ ಸುಭದ್ರೆ ಭಾರವಾದ ಮನಸ್ಸಿನಿಂದಲೇ ಶ್ರೀಕೃಷ್ಣನ ಸನ್ನಿಧಾನ ಬಿಟ್ಟು ಲಾರಿಯೇರಿದೆ. ಮಠದ ಈ ನಿರ್ಧಾರದಿಂದ ಸುಭದ್ರೆಯನ್ನು ನೋಡಿಕೊಳ್ಳುತ್ತಿದ್ದ ಮಾವುತನು ಬೇಜಾರಾಗಿದ್ದಾನೆ.