ಸಿಎಂ ಕಾಲ್ಗುಣದಿಂದಲೇ ರಾಜ್ಯದಲ್ಲಿ ಪ್ರವಾಹ ಉಂಟಾಗುತ್ತಿದೆ: ಕಾಶಪ್ಪನವರ್ ವ್ಯಂಗ್ಯ - Chief Minister Yeddyurappa
ಸಿಎಂ ಯಡಿಯೂರಪ್ಪನವರ ಕಾಲ್ಗುಣದಿಂದಲೇ ಪ್ರವಾಹ ಉಂಟಾಗುತ್ತಿದೆ. ಇವರ ಆಡಳಿತ ಕಾಲದಲ್ಲಿ ರಾಜ್ಯ ಎಷ್ಟೊಂದು ಚೆನ್ನಾಗಿದೆ ಎಂಬುದು, ಪ್ರವಾಹ ಪರಿಸ್ಥಿತಿಯಿಂದಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಂದ ತಿಳಿಯುತ್ತದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವ್ಯಂಗ್ಯವಾಡಿದ್ದಾರೆ. ಕೂಡಲಸಂಗಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಯಾವಾಗ ಮುಖ್ಯಮಂತ್ರಿ ಆಗುತ್ತಾರೋ ಆ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರವಾಹ ಉಂಟಾಗಿ ಜನತೆ ಸಂಕಷ್ಟ ಪಡುವಂತಾಗಿದೆ. ಮಲಪ್ರಭಾ ನದಿಯ ಪ್ರವಾಹದಿಂದ ಹುನಗುಂದ ತಾಲೂಕಿನಲ್ಲಿ 21 ಗ್ರಾಮಗಳು ಮಳುಗಡೆಯಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸಿಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.