ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಯಾವಾಗ ?... ಕ್ರೀಡಾಪಟುಗಳಿಂದ ವಿನೂತನ ಪ್ರತಿಭಟನೆ - Kannada news
ಕೋಲಾರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ನಗರದಲ್ಲೇ ಅತಿ ವಿಶಾಲವಾದ ಮೈದಾನ. ಇಲ್ಲಿ ಕ್ರೀಡಾಪಟುಗಳು ಹಾಗೂ ಜನರು ನಿತ್ಯ ವಾಯುವಿಹಾರಕ್ಕೆ ಬರುತ್ತಾರೆ. ಆದ್ರೆ, ಇವತ್ತು ಇವರೆಲ್ಲರ ಆಕ್ರೋಶದ ಕಟ್ಟೆ ಒಡೆದಿತ್ತು. ಯಾಕೆಂದ್ರೆ ಕ್ರೀಡಾಂಗಣದ ಅವ್ಯವಸ್ಥೆ ಖಂಡಿಸಿ ಬೆಳ್ಳಂಬೆಳಗ್ಗೆ ಕ್ರೀಡಾಪಟುಗಳೆಲ್ಲ ರಸ್ತೆಯಲ್ಲೇ ವ್ಯಾಯಾಮ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ್ರು.