ಬೆಂಗಳೂರಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಮಹಿಳಾ ನಾಯಕಿಯರು ಏನಂತಾರೆ? - ಜೆಡಿಎಸ್ ಪಕ್ಷದ ನಾಯಕಿ, ನೇತ್ರಾ ನಾರಾಯಣ್
ಬೆಂಗಳೂರು: ಒಂದು ದಿನದ ಮಟ್ಟಿಗೆ ಮಹಿಳಾ ದಿನಾಚರಣೆ ಮಾಡಿ, ವಿಶೇಷ ಗೌರವ ನೀಡುವ ಸಮಾಜ ಉಳಿದ ದಿನಗಳಲ್ಲಿ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತೆ. ಈ ಉಳಿದ ದಿನಗಳು ಮಹಿಳೆಯರ ಪಾಲಿಗೆ ಎಷ್ಟು ಸುರಕ್ಷಿತವಾಗಿರುತ್ತೆ ಅನ್ನೋದು ಮುಖ್ಯವಾಗಿದೆ. ಇಂದಿಗೂ ಗಾಂಧೀಜಿಯವರ ಕನಸು ನನಸಾಗಿಲ್ಲ. ರಾತ್ರಿ ವೇಳೆ ಮಹಿಳೆ ಏಕಾಂಗಿಯಾಗಿ ಸಂಚರಿಸಲು ಸುರಕ್ಷತೆ ಇಲ್ಲ. ಹೀಗಾಗಿ ಹೆಣ್ಣುಮಕ್ಕಳೇ ತಮ್ಮ ಧೈರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಮಾಜಿ ಮೇಯರ್ ಪದ್ಮಾವತಿ ಹೇಳಿದ್ರು. ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಮಾತನಾಡಿ, ನಗರದಲ್ಲಿ ಮಹಿಳೆಯರಿಗೆ ಇನ್ನೂ ಸುರಕ್ಷತೆಯ ಭಾವನೆ ಇಲ್ಲ. ಸರ್ಕಾರ ಈ ಬಗ್ಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.