ಸ್ವಾತಂತ್ರ್ಯೋತ್ಸವದ ಬಗ್ಗೆ ಜನಸಾಮಾನ್ಯನ ಅಭಿಪ್ರಾಯ ಹೀಗಿದೆ - ಜನ ಸಾಮಾನ್ಯನ ಅಭಿಪ್ರಾಯವೇನು
ದೇಶವು 73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ದೇಶಕ್ಕಾಗಿ ಪ್ರಾಣ ತೆತ್ತು, ಸ್ವಾತಂತ್ರ್ಯ ತಂದುಕೊಟ್ಟ ಹಲವು ಹೋರಾಟಗಾರರ ತ್ಯಾಗ- ಬಲಿದಾನಗಳನ್ನು ನೆನಪಿಸುತ್ತಾ ದೇಶಾದ್ಯಂತ ಈ ದಿನವನ್ನು ಸಂಭ್ರಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಡಿನ ಜನಸಾಮಾನ್ಯನ ಅಭಿಪ್ರಾಯವೇನು ಅನ್ನೋದನ್ನು ಈಟಿವಿ ಭಾರತ ಸಂಗ್ರಹಿಸುತ್ತಿದೆ. ಈ ಬಗ್ಗೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಮಂಜುನಾಥ ಆರೇರ್, ಈಟಿವಿ ಭಾರತ್ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.