ಹೊಸ ಟ್ರಾಫಿಕ್ ರೂಲ್ಸ್ ಬಗ್ಗೆ ಬೆಂಗಳೂರಿಗರು ಏನಂತಾರೆ? - bangaloretrafficnews
ಬೆಂಗಳೂರು: ಕೇಂದ್ರದ ನೂತನ ಮೋಟಾರ್ ವಾಹನ ಕಾಯ್ದೆ ಅಧಿನಿಯಮ ತಿದ್ದುಪಡಿಯಿಂದಾಗಿ ನಗರದಲ್ಲಿ ಹೊಸ ಸಂಚಾರಿ ನಿಯಮ ಜಾರಿಯಾಗಿದೆ. ಪರಿಷ್ಕೃತ ದಂಡದ ದರ ಸಂಗ್ರಹಿಸುವಲ್ಲಿ ಸಂಚಾರಿ ಪೊಲೀಸರು ನಿರತರಾಗಿದ್ದಾರೆ. ಹೊಸ ಚಲನ್ನಲ್ಲಿ ಹೊಸ ದಂಡದ ದರ ನೋಡಿ ವಾಹನ ಸವಾರರು ದಂಗಾಗಿದ್ದಾರೆ. ನೂರು ರೂಪಾಯಿ ಕಟ್ಟುವ ಜಾಗದಲ್ಲಿ ಸಾವಿರ ರೂಪಾಯಿ ಕಟ್ಟುವುದು ಸವಾರರಿಗೆ ದುಬಾರಿಯಾಗಿ ಪರಿಣಮಿಸಿದೆ. ಇನ್ನೊಂದೆಡೆ ಹೊಸ ನಿಯಮ ಶಿಸ್ತುಬದ್ಧ ವಾಹನ ಚಾಲನೆಗೆ ಅವಕಾಶ ಮಾಡಿಕೊಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೊಸ ಟ್ರಾಫಿಕ್ ರೂಲ್ಸ್ ಅನ್ನು ಬಹುತೇಕರು ಸ್ವಾಗತಿಸಿದರೆ, ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.