ಎಂಜಿನಿಯರಿಂಗ್ ಪಠ್ಯಕ್ರಮದಲ್ಲಿ ಆಗಬೇಕಾದ ಬದಲಾವಣೆ ಏನು? ವಿಟಿಯು ಉಪಕುಲಪತಿ ಸಲಹೆ
ಬೆಂಗಳೂರು: ದಿನೇ ದಿನೆ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಎಂಜಿನಿಯರಿಂಗ್ ಪಠ್ಯಕ್ರಮ ಬದಲಾಗಬೇಕು. ಒಂದೇ ಸ್ಕಿಲ್ ಇದ್ರೆ ಈಗಿನ ಪರಿಸ್ಥಿತಿಯಲ್ಲಿ ಸಾಲದು. ಹೀಗಾಗಿ ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ)ನಂತಹ ಹೊಸ ತಂತ್ರಜ್ಞಾನದ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕಿದೆ ಎಂದು ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾನಿಯಲ (ವಿಟಿಯು) ಉಪಕುಲಪತಿ ಡಾ. ಕರಿಸಿದ್ದಪ್ಪ ಹೇಳಿದ್ದಾರೆ.