ಆನ್ಲೈನ್ ಶಿಕ್ಷಣ ಪರಿಣಾಮಕಾರಿಯಾಗಲು ಏನು ಮಾಡಬೇಕು?
ಬೆಂಗಳೂರು: ಆಫ್ಲೈನ್ ಅಥವಾ ಆನ್ಲೈನ್ ಯಾವುದಾದರೂ ಒಂದರಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳು ಹಾಜರಿರಬೇಕು ಎಂದು ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಿದೆ. ಈಗಾಗಲೇ, ಶಾಲಾ ಕಾಲೇಜುಗಳು ಆರಂಭವಾಗಿದ್ದರೂ ಕೆಲ ವಿದ್ಯಾರ್ಥಿಗಳು ಕೋವಿಡ್ ಆತಂಕದಿಂದ ಆನ್ಲೈನ್ನಲ್ಲೇ ಪಾಠ ಪ್ರವಚನ ಮುಂದುವರೆಸಿದ್ದಾರೆ. ಆದರೆ, ಕೆಲವರು ಆನ್ಲೈನ್ ತರಗತಿಗಳಿಂದಲೂ ದೂರವಿದ್ದಾರೆ. ಹೀಗಾಗಿ, ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ. ಈ ಕುರಿತು ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಪ್ರೊ.ಸದಾಶಿವೇಗೌಡ ಕೆಲ ಸಲಹೆಗಳನ್ನು ನೀಡಿದ್ದಾರೆ.