ಭಾನುವಾರದ ಬಾಡೂಟಕ್ಕಾಗಿ ವೀಕೆಂಡ್ ಕರ್ಫ್ಯೂಗೂ ಕ್ಯಾರೇ ಎನ್ನದ ಮಂಡ್ಯ ಜನತೆ - ವೀಕೆಂಡ್ ಕರ್ಫ್ಯೂಗೂ ಕ್ಯಾರೆ ಎನ್ನದ ಮಂಡ್ಯ ಜನತೆ
ಮಂಡ್ಯದಲ್ಲಿ ವೀಕೆಂಡ್ ಕರ್ಫ್ಯೂ ವೇಳೆ ಭಾನುವಾರ ಖರೀದಿಗೆ ಜನರು ಗುಂಪು ಗುಂಪಾಗಿ ಸೇರಿ ಕೋವಿಡ್ ನಿಯಮವನ್ನ ಗಾಳಿಗೆ ತೂರಿದ್ದಾರೆ. ಸಾಮಾಜಿಕ ಅಂತರ ಇಲ್ಲ, ಕೆಲವರು ಮಾಸ್ಕ್ ಹಾಕಿಲ್ಲ. ಗುಂಪು ಗುಂಪಾಗಿ ನಿಂತು ಮಾಂಸ, ಮೀನು ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಹಿಗಾಗಿ ನಗರಸಭೆ ಆಯುಕ್ತ ಲೋಕೇಶ್ ಸ್ವತಃ ಫೀಲ್ಡ್ಗಿಳಿದು ಜನರನ್ನ ಚದುರಿಸಿ, ಮಾಸ್ಕ್ ಹಾಕದೆ ಇರುವವರಿಗೆ ದಂಡ ವಿಧಿಸಿದ್ದಾರೆ.