ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದ ಬಳ್ಳಾರಿ ಎಸ್ಪಿ, ಪಾಲಿಕೆ ಆಯುಕ್ತೆ.. ಮಾಸ್ಕ್ ಧರಿಸದವರಿಗೆ ಖಡಕ್ ಎಚ್ಚರಿಕೆ, ದಂಡ - ಬಳ್ಳಾರಿ
ಬಳ್ಳಾರಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ಪ್ರಯೋಗ ಕಾರ್ಯಾಚರಣೆ ಅತ್ಯಂತ ಪರಿಣಾಮಕಾರಿಯಾಗಿ ಮುಂದುವರಿದಿದೆ. ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಪೊಲೀಸ್ ಸಿಬ್ಬಂದಿ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ಇಂದು ಸ್ವತಃ ಫೀಲ್ಡಿಗಿಳಿದಿದ್ದರು. ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆ ಮಾರ್ಗ, ತೇರು ಬೀದಿ, ಜೈನ್ ಮಾರುಕಟ್ಟೆ, ಮೋತಿ ಸರ್ಕಲ್ ಸೇರಿದಂತೆ ವಿವಿಧೆಡೆ ಸುತ್ತಾಡಿ ಮಾಸ್ಕ್ ಧರಿಸದ ಜನರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸ್ಥಳದಲ್ಲಿಯೇ ಅನೇಕರಿಗೆ ದಂಡ ವಿಧಿಸಿದರು. ಕೋವಿಡ್ ನಿಯಮಾವಳಿ ಉಲ್ಲಂಘನೆ ಆಧಾರದ ಮೇರೆಗೆ ಕೆಲ ಅಂಗಡಿಗಳ ಮಾಲೀಕರಿಗೂ ಶೋಕಾಸ್ ನೋಟಿಸ್ಅನ್ನು ಇದೇ ಸಂದರ್ಭದಲ್ಲಿ ಜಾರಿ ಮಾಡಿದರು.