ಕರ್ನಾಟಕ

karnataka

ETV Bharat / videos

ಉಪಚುನಾವಣೆಯಲ್ಲಿ ನಾವು ಮೂರು ಕ್ಷೇತ್ರ ಗೆಲ್ಲುತ್ತೇವೆ: ಸಚಿವ ಕೆ. ಗೋಪಾಲಯ್ಯ - ಉಪಚುನಾವಣೆಯಲ್ಲಿ ನಾವು ಮೂರು ಕ್ಷೇತ್ರವನ್ನು ಗೆಲ್ಲುತ್ತೇವೆ

By

Published : Apr 2, 2021, 6:47 AM IST

ಹಾಸನ: ಸಿಎಂ ಕೊಟ್ಟ ಟಾರ್ಗೆಟ್​​ ತಲುಪಿದ್ದೇವೆ. ಲೋಕಸಭೆ ಮತ್ತು ವಿಧಾನಸಭೆಯ ಉಪಚುನಾವಣೆಯಲ್ಲಿ ನಾವು ಮೂರು ಕ್ಷೇತ್ರವನ್ನು ಗೆಲ್ಲುತ್ತೇವೆ. ಇದ್ರಲ್ಲಿ ಯಾವುದೇ ಸಂಶಯ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಹೊರ ವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಬಿಜೆಪಿ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಡಿಲೇಡಿ ವಿಚಾರಕ್ಕೂ ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಉಪಚುನಾವಣೆಯಲ್ಲಿ ಮೂರು ಕ್ಷೇತ್ರವನ್ನು ಗೆಲ್ಲುತ್ತೇವೆ ಸಂಶಯಬೇಡ. ಇನ್ನು ಜಾರಕಿಹೊಳಿ ವಿಚಾರ ನ್ಯಾಯಾಲಯದ ಮುಂದೆ ಇರುವಾಗ ಹೆಚ್ಚು ಮಾತನಾಡುವುದಿಲ್ಲ ಎಂದರು. ನಮ್ಮ ಅಬಕಾರಿ ಇಲಾಖೆಗೆ ಸಿಎಂ ಕಳೆದ ವರ್ಷದಲ್ಲಿ ಎಷ್ಟು ಟಾರ್ಗೆಟ್ ನೀಡಿದ್ರೋ, ಆ ಗುರಿ ತಲುಪಿದ್ದೇವೆ. 22 ಸಾವಿರದ 700 ಕೋಟಿ ರೂ.ಗಳ ಆದಾಯ ತರಬೇಕು ಎಂದು ಅಬಕಾರಿ ಇಲಾಖೆಗೆ ಸೂಚನೆ ನೀಡಿದಂತೆ ಗುರಿ ಮುಟ್ಟಿ, 300 ಕೋಟಿ ಆದಾಯಗಳಿಸುವ ವಿಶ್ವಾಸವಿದೆ ಎಂದರು.

ABOUT THE AUTHOR

...view details