ದರ್ಶನ್-ಯಶ್ ಬಗ್ಗೆ ಮಾತಾಡುವಾಗ ಯೋಚನೆ ಮಾಡಿ ಮಾತನಾಡಬೇಕು: ಅಭಿಶೇಕ್ - ಯಶ್
ನಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆ ಎದುರಿಸುತ್ತಿದ್ದೇವೆ. ಪಕ್ಷೇತರವಾಗಿ ಸ್ಪರ್ಧೆ ಮಾಡಿ ಚುನಾವಣೆ ಎದುರಿಸೋದು ಎಷ್ಟು ಕಷ್ಟ ಅಂತಾ ನಿಮಗೆ ಗೊತ್ತು. ನಾನು ಮೈತ್ರಿ ಅಭ್ಯರ್ಥಿ ಇಬ್ಬರು ಬ್ಯಾಕ್ಗ್ರೌಂಡ್ ಇಟ್ಟುಕೊಂಡು ಬಂದಿರೋರು. ಆದ್ರೆ ದರ್ಶನ್ ಮತ್ತು ಯಶ್ ಬಹಳ ಕಷ್ಟ ಪಟ್ಟು ಹೀರೋ ಆಗಿದ್ದಾರೆ. ಸಾಕಷ್ಟು ಬೆವರು ಸುರಿಸಿ ಕೆಲ್ಸ ಮಾಡಿದ್ದಾರೆ. ಅಂತಹವರ ಬಗ್ಗೆ ಮಾತನಾಡೋವಾಗ ಯೋಚನೆ ಮಾಡಿ ಮಾತಾಡಬೇಕು. ನಾವು ಗೆದ್ರು ಇಲ್ಲೆ ಇರ್ತೀವಿ, ಸೋತರೂ ಇಲ್ಲೆ ಇರ್ತೇವಿ, ಎಲ್ಲೂ ಹೋಗಲ್ಲ. ಅವರು ಗೆದ್ರೆ ಇಲ್ಲೆ ಮನೆ ಮಾಡಿ ಇರ್ತಾರಾ ಎಂದು ಅಭಿಷೇಕ್ ಪ್ರಶ್ನೆ ಮಾಡಿದರು.