ಬಂಧನ ರಾಜಕೀಯ ಪ್ರೇರಿತವಾಗಿದ್ದರೆ, ನಾವು ಡಿಕೆಶಿ ಪರ ನಿಲ್ಲುತ್ತೇವೆ: ಆರ್.ವಿ. ಹರೀಶ್ - RV Harish, Secretary General of the JDS
ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ತಪ್ಪು ಮಾಡಿದ್ರೆ, ಇಡಿ ತನಿಖೆ ಮಾಡಲಿ. ಆದರೆ ರಾಜಕೀಯ ಪ್ರೇರಿತವಾಗಿ ತೊಂದರೆ ಕೊಡುವುದಾದರೆ ನಾವು ಖಂಡಿಸುತ್ತೇವೆ ಎಂದು ಜೆಡಿಎಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ವಿ.ಹರೀಶ್ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಿವಕುಮಾರ್ ಅವರು ಅವ್ಯವಹಾರ ಮಾಡಿದ್ದರೆ, ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಬಿಜೆಪಿಯಲ್ಲಿ ಯಾರು ಅವ್ಯವಹಾರ ಮಾಡೇ ಇಲ್ಲವೇ ? ಎಂದು ಹರೀಶ್ ಪ್ರಶ್ನಿಸಿದ್ದಾರೆ.