ಕರ್ನಾಟಕ

karnataka

ETV Bharat / videos

ನಾವು ದೇಶ, ಸಂಸ್ಕೃತಿ, ಸಂಪ್ರದಾಯಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿದ್ದೇವೆ : ಮಾಜಿ ಸಚಿವ ಎ. ಮಂಜು - Former Minister A. Manju

By

Published : Feb 21, 2021, 6:57 PM IST

ಹಾಸನ : ರಾಮಮಂದಿರಕ್ಕೆ ಹಣ ಕೇಳುವವರು ಗೂಂಡಾಗಳು ಎನ್ನುವವರು ಚುನಾವಣೆ ಬಂದಾಗ ಒಂದು ಟಿಕೆಟ್​ಗೆ 4ರಿಂದ 5 ಕೋಟಿ ರೂ. ಇಸ್ಕೋಳ್ತಾರಲ್ಲ, ಅದಕ್ಕೆ ಏನೆನ್ನಬೇಕು ಎಂದು ಮಾಜಿ ಸಚಿವ ಎ. ಮಂಜು ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಭಾರತ ಇರೋದೆ ಸಂಪ್ರದಾಯ ಮತ್ತು ಸಂಸ್ಕೃತಿಯ ಮೇಲೆ. ರಾಮಮಂದಿರ ಕಟ್ಟುತ್ತಿರುವುದೇ ಒಂದು ಮಹತ್ತರ ಕಾರ್ಯ. ಇಂತಹ ಕಾರ್ಯಕ್ಕೆ ದೇಶದ ಜನ 10 ರೂಪಾಯಿಂದ ಹಿಡಿದು ತಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಹಣ ನೀಡುತ್ತಿದ್ದಾರೆ. ನಾವು ದೇಶಕ್ಕಾಗಿ, ಸಂಸ್ಕೃತಿ, ಸಂಪ್ರದಾಯ ಮತ್ತು ದೇವರ ಕಾರ್ಯಕ್ಕಾಗಿ ಹಣ ಸಂಗ್ರಹಣೆ ಮಾಡಿದ್ದೇವೆ. ಅತೀ ಹೆಚ್ಚು ದೇಣಿಗೆ ಇಸ್ಕೊಂಡು ಬಿ-ಫಾರಂ ನೀಡೋ ಪಕ್ಷವಲ್ಲ ಎಂದು ಗೂಂಡಾ ಎಂಬ ಹೆಚ್​ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ರು.

ABOUT THE AUTHOR

...view details