ನಾವೆಲ್ಲ ಎಲ್ಕೆಜಿಯಿಂದ ಸ್ನೇಹಿತರು: ಧಾರವಾಡ ಅಪಘಾತದ ಗಾಯಾಳು ಆಶಾ ಹೇಳಿಕೆ
ಧಾರವಾಡ: ನಾವೆಲ್ಲ ಎಲ್ಕೆಜಿಯಿಂದ ಕ್ಲಾಸ್ಮೇಟ್ಸ್ ಎಂದು ಭೀಕರ ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳು ಆಶಾ ಹೇಳಿದರು. ಹದಿನೇಳು ಜನ ರಿಲ್ಯಾಕ್ಸ್ಗಾಗಿ ಗೋವಾಗೆ ತೆರಳುತ್ತಿದ್ದೆವು. ರೆಸಾರ್ಟ್ ಸಹ ಬುಕ್ ಮಾಡಿಕೊಂಡಿದ್ದೆವು. ವಾಟ್ಸ್ ಆ್ಯಪ್ ಮೂಲಕ ಎಲ್ಲರೂ ಸೇರಿ ಪ್ರವಾಸದ ಪ್ಲ್ಯಾನ್ ಮಾಡಿಕೊಂಡಿದ್ದೆವು. ನಮ್ಮ ಸಂಬಂಧಿಗೆ ಫೋನ್ ಮಾಡಿ ಧಾರವಾಡಕ್ಕೆ ಬರುವ ಬಗ್ಗೆ ಹೇಳಿದ್ದೆ. ನಾನು ಕೊನೆಯ ಸೀಟ್ನಲ್ಲಿ ನಿದ್ದೆಯಲ್ಲಿದ್ದೆ. ಅಪಘಾತವಾದಾಗ ಎಚ್ಚರವಾಗಿ ಕೂಡಲೇ ಸಂಬಂಧಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ ಎಂದು ಅವರು ತಿಳಿಸಿದರು.
Last Updated : Jan 15, 2021, 6:17 PM IST