ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ನಾವೆಲ್ಲಾ ತಲೆ ಬಾಗಲೇಬೇಕು: ಮಸ್ಲಿಂ ಧರ್ಮಗುರು - Ayodhya verdic
ಕೊಪ್ಪಳ: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಯೊಬ್ಬರು ತಲೆ ಬಾಗಬೇಕು ಎಂದು ಮುಸ್ಲಿಂ ಸಮಾಜದ ಧರ್ಮಗುರುಗಳಾದ ಮುಫ್ತಿ ನಜೀರ್ ಅಹ್ಮಮದ್ ಖಾದ್ರಿ ತಸ್ಕೀನ್ ಹೇಳಿದ್ದಾರೆ. ದೇಶದ ಹಿತದೃಷ್ಟಿಯಿಂದ ಸರ್ವೋಚ್ಛ ನ್ಯಾಯಾಲಯ ಈ ತೀರ್ಪು ನೀಡಿದೆ. ಅದಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕು. ಈ ತೀರ್ಪು ಬರುವ ಒಂದು ತಿಂಗಳ ಮುಂಚಿತವಾಗಿಯೇ ಪ್ರಾರ್ಥನೆಗೆ ಬರುವ ಸಮಾಜದ ಎಲ್ಲರಿಗೂ ಮನವಿ ಮಾಡಲಾಗಿತ್ತು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಜನರು ಸಹ ನಡೆದುಕೊಂಡಿದ್ದಾರೆ. ಇದೇ ರೀತಿ ಮುಂದೆಯೂ ಸಹ ಎಲ್ಲಾ ಸಮಾಜದವರು ಸೌಹಾರ್ದತೆಯಿಂದ ಬಾಳಬೇಕು ಎಂದರು.