ನೀರು ಪೂರೈಕೆ ವ್ಯತ್ಯಯ ಹಿನ್ನೆಲೆ ಪಿಡಿಒಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು - ಧಾರವಾಡದಲ್ಲಿ ಕುಡಿಯುವ ನೀರು ಪೂರೈಕೆ ವ್ಯತ್ಯಯ
ಧಾರವಾಡ: ಕುಡಿಯುವ ನೀರು ಪೂರೈಕೆ ವ್ಯತ್ಯಯ ಹಿನ್ನೆಲೆ ಸಮಸ್ಯೆ ಆಲಿಸಲು ಬಂದು ಗ್ರಾಪಂ ಪಿಡಿಒಗೆ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ. ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಆದ್ರೆ ಅಧಿಕಾರಿಗಳು ಗಮನವಹಿಸಿಲ್ಲಾ ಎಂದು ಸ್ಥಳೀಯರು ದೂರಿದ್ದಾರೆ. ಖುದ್ದಾಗಿ ಸ್ಥಳೀಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದಾಗ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಗದಿ ಗ್ರಾಮ ಪಂಚಾಯತಿ ಪಿಡಿಒ ರೇಣುಕಾ ಕೊಪ್ಪದಗೆ ಘೇರಾವ್ ಹಾಕಿ ತರಾಟೆ ತೆಗೆದುಕೊಂಡಿದ್ದಾರೆ. ಹಲವು ಸಾರಿ ಕೇಳಿಕೊಂಡರು ಸರಿಯಾಗಿ ನೀರು ಪೂರೈಕೆ ಮಾಡಿಲ್ಲಾ ಸುಮಾರು ದಿನಗಳಿಂದ ಮನವಿ ಮಾಡಿಕೊಂಡರು ಸ್ಪಂದನೆ ನೀಡಿಲ್ಲಾ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.