ಕೋಡಿ ಬಿದ್ದ ಕೆರೆ: ಗ್ರಾಮಕ್ಕೆ ನುಗ್ಗಿದ ನೀರಿಂದ ಜನ ಜೀವನ ಅಸ್ತವ್ಯಸ್ಥ - chitradurga today news
ಚಿತ್ರದುರ್ಗ ತಾಲೂಕಿನ ಕಳೆದ ರಾತ್ರಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಕೆರೆಗಳು ತುಂಬಿದ್ದು, ಕೋಡಿ ಒಡೆದಿವೆ. ಮಲ್ಲಾಪುರ ಗ್ರಾಮ ಬಳಿಯ ಕೆರೆ ಭರ್ತಿಯಾಗಿ, ಕೋಡಿ ಬಿದ್ದು, ಗ್ರಾಮಕ್ಕೆ ನೀರು ನುಗ್ಗಿದೆ. ಮಲ್ಲಾಪುರ ಸೇರಿ ಹಲವೆಡೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಇದರಿಂದ ಅಲ್ಲಿ ವಾಸವಿದ್ದ ಜನಜೀವನ ಅಸ್ತವ್ಯಸ್ಥವಾಗಿದೆ. ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಚಿತ್ರದುರ್ಗ ತಾಲೂಕಿನ ಪಂಡ್ರಳ್ಳಿ ಗ್ರಾಮದಲ್ಲಿರುವ ಕೆರೆ ಮೈದುಂಬಿ ಹರಿಯುತ್ತಿದೆ. ಈ ಕೆರೆ 6 ವರ್ಷಗಳಿಂದ ನೀರಿಲ್ಲದೆ ಭಣಗುಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ತುಂಬಿರುವ ಕೆರೆ ನೋಡಲು ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ.