ಸೊನ್ನಾ ಬ್ಯಾರೇಜ್ನಿಂದ ಭೀಮಾ ನದಿಗೆ ನೀರು: ರಾಜ್ಯ ಹೆದ್ದಾರಿ ಜಲಾವೃತ... - Yadagiri State Highway drowning
ಯಾದಗಿರಿ: ಸೊನ್ನಾ ಬ್ಯಾರೇಜ್ನಿಂದ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡಲಾಗಿದ್ದು, ಜಿಲ್ಲೆಯಿಂದ ವಿಜಯಪುರ, ಹೈದ್ರಾಬಾದ್ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಜಲಾವೃತಗೊಳ್ಳುವ ಮೂಲಕ ವಾಹನ ಸವಾರರು ಪರದಾಡುವಂತಾಯಿತು. ನದಿ ತೀರದ ಅನೇಕ ಗ್ರಾಮಗಳಿಗೆ ನುಗ್ಗಿದ ನದಿಯ ಹಿನ್ನೀರಿನಿಂದ ರೈತರು ಬೆಳೆದ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ನೂರಾರು ಜನರ ಮನೆ ಕಸಿದುಕೊಂಡಿದೆ. ನದಿಯಿಂದ ಮೂರು ಕಿ.ಮೀ ದೂರದಲ್ಲಿರುವ ರಾಜ್ಯ ಹೆದ್ದಾರಿ ಮೇಲೆ ನುಗ್ಗಿದ ನೀರಿನಿಂದ ರಸ್ತೆ ಸಂಪೂರ್ಣ ಮುಳುಗಿ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಯಿತು. ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುವ ಪ್ರಮುಖ ರಾಜ್ಯ ಹೆದ್ದಾರಿ ನೀರಿನಲ್ಲಿ ಮುಳಗಿದರು ಕೆಲ ವಾಹನ ಸವಾರರು ತಮ್ಮ ಜೀವದ ಹಂಗನ್ನು ತೊರೆದು ಅದೇ ರಸ್ತೆಯಲ್ಲಿ ಸಂಚರಿಸಿ ಅಲ್ಲಿಂದ ತೆರಳಿದರು.