ಬೆಳಗಾವಿ ಡಿಸಿ ಹಾಡಿಗೆ ಮುಗಿಲು ಮುಟ್ಟಿದ ಮಕ್ಕಳ ಕೇಕೆ... ವಿಡಿಯೋ ನೋಡಿ - ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ಹಾಡು, ನೃತ್ಯಗಳಿಗೆ ಮನಸೋತ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ವತಃ ತಾವೇ ಮೈಕ್ ಹಿಡಿದು ಹಾಡಲು ಆರಂಭಿಸುತ್ತಿದ್ದಂತೆ ಮಕ್ಕಳ ಕೇಕೆ ಮುಗಿಲು ಮುಟ್ಟಿತು. ಈ ವೇಳೆ ಜಿಲ್ಲಾಧಿಕಾರಿಗಳು, ಮೇ ಶಾಹರ್ ತೋ ನಹೀ.. ಮಗರ್... ಎಂದು ಹಾಡಿದಾಗ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಪುಳಕಗೊಂಡರು. ಇದರಿಂದ ಉತ್ತೇಜನಗೊಂಡ ಡಿಸಿ, ಕನ್ನಡವೆಂದರೆ ಕುಣಿಯುವೆನು... ಕನ್ನಡವೆಂದರೆ ಮಣಿಯುವೆನು.... ಎಂದು ಹಾಡಿದಾಗ ನೆರೆದ ನೂರಾರು ಮಕ್ಕಳು ಕೂಡ ಜಿಲ್ಲಾಧಿಕಾರಿ ಹಾಡಿಗೆ ಸಾಥ್ ನೀಡಿ ಹಾಡಿದರು.