ಬೈಕ್ ಸವಾರರಿಗೆ ಬಿಸಿಮುಟ್ಟಿಸಿದ ಪೊಲೀಸರು.. ಹೈ ಬೀಮ್ ಲೈಟ್ ಬಳಸದಂತೆ ಸೂಚನೆ - ಹುಬ್ಬಳ್ಳಿ ಸುದ್ದಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೈ ಬೀಮ್ ಮತ್ತು ಎಲ್ಇಡಿ ಲೈಟ್ ಉಪಯೋಗಿಸುತ್ತಿದ್ದ ಬೈಕ್ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ರಾತ್ರಿ ಸಮಯದಲ್ಲಿ ಹೈ ಬೀಮ್ ಮತ್ತು ಎಲ್ಇಡಿ ಲೈಟ್ಗಳನ್ನು ಬಳಸುವುದರಿಂದ ಅಪಘಾತ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಅಂತಹ ವಾಹನಗಳನ್ನು ಗುರುತಿಸಿ ಅವುಗಳನ್ನು ತೆಗೆಸುವ ಮೂಲಕ ಸಂಚಾರಿ ನಿಯಮಗಳ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ.