ಕರ್ನಾಟಕ

karnataka

ETV Bharat / videos

ರಾಷ್ಟ್ರೀಯ ಯುವ ದಿನ: ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ವಾಕ್​​​ಥಾನ್ - ವಾಕ್​​​ಥಾನ್

By

Published : Jan 10, 2021, 11:56 AM IST

ಮಂಗಳೂರು: ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿ ದ.ಕ. ಜಿಲ್ಲಾ ಯುವ ಮೋರ್ಚಾ ವತಿಯಿಂದ ವಾಕ್​​ಥಾನ್ ನಡೆಯಿತು. ಸ್ವಾಮಿ ವಿವೇಕಾನಂದರ ಸಮರ್ಥ ಭಾರತ ಕಲ್ಪನೆಯಲ್ಲಿ ನಡೆದ ಈ 'ವಾಕ್​​​ಥಾನ್' ಅನ್ನು‌‌ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಿಗೆ ಭಗವಾಧ್ವಜ ನೀಡುವ ಮೂಲಕ ಉದ್ಘಾಟಿಸಿದರು. ವಾಕ್​​​ಥಾನ್ ನಗರದ ನವಭಾರತ ವೃತ್ತದಿಂದ ಹೊರಟು ಕದ್ರಿ ಮೈದಾನದಲ್ಲಿ ಕೊನೆಗೊಂಡಿತು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮನಪಾ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಶಕೀಲಾ ಕಾವಾ, ಶ್ವೇತಾ ಪ್ರಸಾದ್, ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಸದಸ್ಯರು ಸೇರಿದಂತೆ ಸುಮಾರು 500 ಕ್ಕೂ ಅಧಿಕ ಮಂದಿ ಈ ವಾಕ್​​​ಥಾನ್​​ನಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details