ಶಿವಮೊಗ್ಗ: ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ.. ವಾಕ್ಥಾನ್ - ಬಿಜೆಪಿ ಕಾರ್ಯಕರ್ತರಿಂದ ವಾಕ್ ಥಾನ್
ಶಿವಮೊಗ್ಗ: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ವಾಕ್ಥಾನ್ ನಡೆಸಿದರು. ನಗರದ ಶಿವಮೂರ್ತಿ ಸರ್ಕಲ್ನಿಂದ ಗೋಪಿ ಸರ್ಕಲ್ವರೆಗೆ ಮ್ಯಾರಥಾನ್ ನಡೆಸುವ ಮೂಲಕ ವಿವೇಕಾನಂದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮೃದ್ಧ ಭಾರತ ಕಟ್ಟುವ ದೆಸೆಯಲ್ಲಿ ಎಲ್ಲರೂ ಸೇವೆ ಸಲ್ಲಿಸಬೇಕು. ಜೊತೆಗೆ ಸ್ವದೇಶಿ ವಸ್ತುಗಳನ್ನು ಬಳಸಬೇಕು ಎಂದು ಪಕ್ಷದ ಮುಖಂಡರು ಕರೆ ನೀಡಿದರು. ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.