ಶಾಲಾ ಮಕ್ಕಳಿಂದ ಮತದಾನ ಜಾಗೃತಿ ಜಾಥಾ.. - ಮತದಾನ ಜಾಗೃತಿ ಜಾಥ ರಾಣೆಬೆನ್ನೂರು ಸುದ್ದಿ
ರಾಣೆಬೆನ್ನೂರು: ನಗರದ ಖನ್ನೂರ ವಿದ್ಯಾನಿಕೇತನ ಶಾಲಾ ಮಕ್ಕಳಿಂದ ಇಂದು ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಕೋರ್ಟ್ ವೃತ್ತದ ಮೂಲಕ ಜಾಥಾ ಪ್ರಾರಂಭವಾಗಿ ಎಡಿಬಿ ರಸ್ತೆ, ಪೋಸ್ಟ್ ಸರ್ಕಲ್, ಎಂಜಿ ರಸ್ತೆ, ದುರ್ಗಾ ವೃತ್ತದಲ್ಲಿ ಜನರಿಗೆ ಮತದಾನ ಜಾಗೃತಿ ಅರಿವು ಮೂಡಿಸಲಾಯಿತು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎಸ್.ಕಾಂಬಳೆ, ಖನ್ನೂರು ಸಂಸ್ಥೆಯ ಅಧ್ಯಕ್ಷ ಮಹಾದೇವಪ್ಪ ಖನ್ನೂರ, ಮುಖ್ಯೋಪಾಧ್ಯಾಯ ಮಹಾಂತೇಶ ಕಮ್ಮಾರ, ಚಂದ್ರಶೇಖರ ಹುಳ್ಯಾಳ, ಅರುಣ ಬಡಿಗೇರ ಸೇರಿದಂತೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಜಾಗೃತಿ ಜಾಥಾದಲ್ಲಿ ಭಾಗಿಯಾಗಿದ್ದರು.