ಪಾವಗಡದಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಜಾಗೃತಿ ಜಾಥಾ - ತುಮಕೂರು ನ್ಯೂಸ್
ತುಮಕೂರು/ಪಾವಗಡ: ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಸ್ವೀಪ್ ಸಮಿತಿ ತುಮಕೂರು ಮತ್ತು ಪಾವಗಡ ವತಿಯಿಂದ ಪಟ್ಟಣದಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾರರ ಪಟ್ಟಿಯ ಜಾಗೃತಿ ಜಾಥಾ ನಡೆಸಲಾಯಿತು. ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವರದರಾಜು, ಇಒ ನರಸಿಂಹಮೂರ್ತಿ, ತೋಟಗಾರಿಕೆ ಇಲಾಖೆಯ ಸುಧಾಕರ್, ಬಿಆರ್ಸಿ ಪವನ್ ಕುಮಾರ್ ರೆಡ್ಡಿ ಹಾಗೂ ಪಿಡಿಒ, ಪೌರ ಕಾರ್ಮಿಕರು, ತಾ.ಪಂ. ಸಿಬ್ಬಂದಿ ಭಾಗವಹಿಸಿದ್ದರು.