ಕಲಬುರಗಿ: ಟ್ರೈನ್ ಬೋಗಿ ಮಾದರಿ ಮತಗಟ್ಟೆಯಲ್ಲಿ ಮತದಾನ! - Vote in a Train Boogie Model Booth at kalaburagi
ಕಲಬುರಗಿ: ಜಿಲ್ಲೆಯಲ್ಲಿ ಕ್ರಮೇಣವಾಗಿ ಮತದಾನ ಚುರುಕು ಪಡೆಯುತ್ತಿದ್ದು, ಟ್ರೈನ್ ಬೋಗಿ ಮಾದರಿ ಮತಗಟ್ಟೆಯಲ್ಲಿ ಮತದಾರರು ಉತ್ಸುಕರಾಗಿ ಮತದಾನ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಕೆರೆ ಬೋಸಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 147 ಮತ್ತು 148ರಲ್ಲಿ ಖುಷಿಯಿಂದ ಮತದಾನ ಮಾಡಲಾಗುತ್ತಿದೆ. ಟ್ರೈನ್ ಒಳಗೆ ಪ್ರವೇಶ ಮಾಡಿ ಮತದಾನ ಮಾಡಿರುವ ಅನುಭವವನ್ನು ಮತದಾರರು ಅನುಭವಿಸಿದ್ದಾರೆ. ಶಾಲೆಗೆ ಕಳೆದ 8 ತಿಂಗಳ ಹಿಂದೆ ಟ್ರೈನ್ ಬೋಗಿ ಮಾದರಿಯಲ್ಲಿ ಪೇಂಟಿಂಗ್ ಮಾಡಲಾಗಿದೆ. ಇದಾದ ನಂತರ ಪ್ರಥಮ ಬಾರಿಗೆ ಮತದಾನ ಕೇಂದ್ರ ಮಾಡಲಾಗಿದ್ದು, ಖುಷಿಯಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.