ಧಾರವಾಡ: ಮರಳಿನಲ್ಲಿ ಅರಳಿದ ವಿವೇಕಾನಂದರ ಕಲಾಕೃತಿಗೆ ಭಾರಿ ಮೆಚ್ಚುಗೆ - darwada sand artwork
ಧಾರವಾಡ: ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಯ ನಿಮಿತ್ತ ನಗರದ ಕಲಾವಿದರೊಬ್ಬರು ವಿವೇಕಾನಂದರ ಮರಳು ಕಲಾಕೃತಿ ರಚಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ಮರಳಿನಲ್ಲಿ ವಿವೇಕಾನಂದರ ಕಲಾಕೃತಿ ರಚಿಸಲಾಗಿದೆ. ಧಾರವಾಡದ ಗಾಯತ್ರಿಪುರ ಕಲಾವಿದ ಮಂಜುನಾಥ ಹಿರೇಮಠ ಒಂದು ಟಿಪ್ಪರ್ ಮರಳಿನಲ್ಲಿ ಕಲಾಕೃತಿ ರಚನೆ ಮಾಡಿದ್ದಾರೆ. ಇದಕ್ಕೆ ಸುಮಾರು ನಾಲ್ಕರಿಂದ ಐದು ಗಂಟೆ ಸಮಯಾವಕಾಶ ಹಿಡಿದಿದೆ. ಈ ಮರಳುಶಿಲ್ಪಕ್ಕೆ ನಗರದ ವಿವಿಧ ಬಡಾವಣೆಗಳ ಜನರು ಪೂಜೆ ಸಲ್ಲಿಸಿದ್ದಾರೆ. ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಮರಳು ಶಿಲ್ಪದ ಮುಂಭಾಗದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.