ಚೀನಾ ವಸ್ತುಗಳನ್ನು ಸುಟ್ಟು ವಿಶ್ವ ಹಿಂದೂ ಪರಿಷತ್ ಆಕ್ರೋಶ - ಭಾರತ ಚೀನಾ ಕಾಳಗ
ಶಿವಮೊಗ್ಗ: ಗಾಲ್ವಾನ್ನಲ್ಲಿ ಭಾರತ-ಚೀನಾ ನಡುವಿನ ಕಾಳಗದಲ್ಲಿ ಹುತಾತ್ಮರಾದ ಯೋಧರಿಗೆ ಚೀನಾ ವಸ್ತುಗಳನ್ನು ಸುಡುವ ಮೂಲಕ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ನಮನ ಸಲ್ಲಿಸಿದರು. ನಗರದ ಶಿವಪ್ಪನಾಯಕ ಪ್ರತಿಮೆ ಬಳಿ ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ವಸ್ತುಗಳನ್ನು ಬಳಸಿ ಎನ್ನುವ ಸಂದೇಶ ಸಾರುವ ಮೂಲಕ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.