ವಿರುಪಾಪುರಗಡ್ಡೆಯಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಹೀಗಿದೆ ನೋಡಿ... - Virupapuragadde - operation-rescue
ಕೊಪ್ಪಳದಲ್ಲಿ ಮಳೆ ಇಲ್ಲದಿದ್ದರೂ ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ವಿರುಪಾಪುರಗಡ್ಡೆಯಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. 23 ಜನ ವಿದೇಶಿ ಪ್ರವಾಸಿಗರು ಸೇರಿ ಸುಮಾರು 200 ಕ್ಕೂ ಹೆಚ್ಚು ಜನರು ಅಲ್ಲಿದ್ದು, ಅವರ ರಕ್ಷಣೆಗಾಗಿ ಎನ್ಡಿಆರ್ಎಫ್ ತಂಡ ಬೆಳಗ್ಗೆಯಿಂದ ಶ್ರಮಿಸುತ್ತಿದೆ. ಈ ರೆಸ್ಕ್ಯೂ ಆಪರೇಷನ್ ಹೇಗೆ ನಡೆಯುತ್ತಿದೆ ಎಂಬುದರ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...