ಬೀದರ್ನಲ್ಲಿ ವಿನಾಯಕನ ಅದ್ಧೂರಿ ನಿಮಜ್ಜನ - ಸಂಭ್ರಮದಿಂದ ನಿಮಜ್ಜನ
ಬೀದರ್: ನಗರದ ವಿವಿಧ ಕಡೆ ಪ್ರತಿಷ್ಠಾನ ಮಾಡಿದ್ದ ವಿಘ್ನ ವಿನಾಯಕನ ಮೂರ್ತಿಗಳನ್ನು ನಗರದ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿ ಸಡಗರ, ಸಂಭ್ರಮದಿಂದ ನಿಮಜ್ಜನ ಮಾಡಲಾಯಿತು. ನಗರದ ಗವಾನ್ ಚೌಕ್ನಲ್ಲಿ ಗಣೇಶ ಮಹಾಮಂಡಳ ನೇತೃತ್ವದಲ್ಲಿ 500ಕ್ಕೂ ಅಧಿಕ ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಅಬ್ಬರ ಜೋರಾಗಿತ್ತು. ಈ ಬಾರಿ ಮಳೆ ಇಲ್ಲದಕ್ಕೆ ಕೆರೆ, ಬಾವಿ ಹಾಗೂ ಮಾಂಜ್ರಾ ನದಿ ಬರಿದಾಗಿದೆ. ಅಂತೆಯೇ ಗಣೇಶ ಮೂರ್ತಿಗಳನ್ನು ತೆಲಂಗಾಣ ಗಡಿಯಲ್ಲಿರುವ ಸುಲ್ತಾನಪೂರ್ ಗ್ರಾಮದ ಹೊರ ಭಾಗದಲ್ಲಿ ಗಣೇಶನ ನಿಮಜ್ಜನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.