ವಿನಯ ತಿಮ್ಮಾಪೂರ ಮಾಡಿರುವ ಆರೋಪ ನಿರಾಧಾರ: ರಾಹುಲ್ ಕಲೂತಿ
ಬಾಗಲಕೋಟೆ: ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಎಂಎಲ್ಸಿ ಆರ್.ಬಿ.ತಿಮ್ಮಾಪೂರ ಅವರ ಪುತ್ರ ವಿನಯ ತಿಮ್ಮಾಪೂರ ಅವರು ಮಾಡಿರುವ ಆರೋಪ ನಿರಾಧಾರ ಎಂದು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಕಲೂತಿ ಸ್ಪಷ್ಟಪಡಿಸಿದ್ದಾರೆ. ನವನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿನಯ ಅವರು ಮಾಡಿರುವ ಆರೋಪ ಸುಳ್ಳು. ಏಕೆಂದರೆ ಕಾಂಗ್ರೆಸ್ ಪಕ್ಷದ ಆಂತರಿಕವಾಗಿ ನಡೆದ ಈ ಚುನಾವಣೆಯಲ್ಲಿ ಅವರು ರಾಜ್ಯಮಟ್ಟದ ಪ್ರಧಾನ ಕಾರ್ಯದರ್ಶಿ ಆಗಿಯೂ ಆಯ್ಕೆ ಆಗಿದ್ದಾರೆ. ಹಾಗಾದರೆ ಅವರು ಆಯ್ಕೆ ಆಗಿರುವುದು ಅಕ್ರಮದಿಂದಲೇ ಎಂದು ಪ್ರಶ್ನೆ ಮಾಡಿದ್ರು. ಅವರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದರು. ಈ ಬಗ್ಗೆ ನಮ್ಮ ಮುಖಂಡರ ಗಮನಕ್ಕೂ ತರಲಾಗಿದೆ. ಆದರೂ ಸಹ ಪಕ್ಷದ ಸಂಘಟನೆ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
TAGGED:
Bagalkote