ವಿಚಾರಣೆ ಎದುರಿಸಿ ಹೊರಬಂದ ವಿನಯ್ ಕುಲಕರ್ಣಿ ಸಹೋದರ, ಮಾವ - ಸಿಬಿಐ ಅಧಿಕಾರಿಗಳು ವಿಚಾರಣೆ
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ಹಾಗೂ ಸಂಬಂಧಿಗಳು ಸಿಬಿಐ ವಿಚಾರಣೆ ಮುಗಿಸಿ ಹೊರಬಂದಿದ್ದಾರೆ. ವಿನಯ್ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಮಾವ ಚಂದ್ರಶೇಖರ್ ಇಂಡಿ, ಸೋಮಶೇಖರ್ ನ್ಯಾಮಗೌಡ ಸಿಬಿಐ ವಿಚಾರಣೆ ಮುಗಿಸಿ ಹೊರ ಬಂದಿದ್ದಾರೆ. ಸತತ ಮೂರೂವರೆ ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.