ಹಕ್ಕುಪತ್ರ, ನಿವೇಶನಗಳ ಸಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ - ಹಕ್ಕು ಪತ್ರ ವಿತರಣೆ
ಮಂಡ್ಯ: ಕೀಲಾರ ಗ್ರಾಮದ ನಿವೇಶನಗಳನ್ನು ಸಕ್ರಮಗೊಳಿಸಿ ಹಾಗೂ ತುರ್ತಾಗಿ ಹಕ್ಕು ಪತ್ರಗಳ ನೀಡುವಂತೆ ಒತ್ತಾಯಿಸಿ ಕೀಲಾರ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಕೀಲಾರ ಗ್ರಾಮದ ಪರಿಶಿಷ್ಟ ಜಾತಿಯ 60 ಕುಟುಂಬಗಳಿಗೆ ಸರ್ವೆ ನಂ.263ರ 9-15 ಗುಂಟೆಯಲ್ಲಿರುವ ಮನೆಗಳಿಗೆ ಹಕ್ಕು ಪತ್ರ ಹಾಗೂ ನಿವೇಶನಗಳ ಸಕ್ರಮಗೊಳಿಸುವಂತೆ ಆಗ್ರಹಿಸಿದರು.