ಸರ್ಕಾರ ಕೊಟ್ಟರೂ ಅಧಿಕಾರಿಗಳು ನೀಡ್ತಿಲ್ಲ, ಸೂರಿಗಾಗಿ 180 ಕುಟುಂಬಗಳಿಂದ ಪ್ರತಿಭಟನೆ - ಅಧಿಕಾರಿಗಳು ನಿರ್ಲಕ್ಷ್ಯ
ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಮೇನಹಳ್ಳಿಯ ಸುಮಾರು 180 ಕುಟುಂಬಗಳು ಸೂರಿಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು. ಅರ್ಹ ಫಲಾನುಭವಿಗಳಿಗೆ ನ್ಯಾಯಾಲಯ ಗ್ರಾಮದ ಜಮೀನಿನಲ್ಲಿ ಆದೇಶಿಸಿದ್ದ ನಿವೇಶನವನ್ನು ನೀಡಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.