ದಬ್ಬಾಳಿಕೆ ಆರೋಪ: ಧಾರವಾಡ ಡಿಸಿ ಗನ್ ಮ್ಯಾನ್ ಅಮಾನತಿಗೆ ಗ್ರಾಮಸ್ಥರ ಆಗ್ರಹ - Villagers demand suspension of DC gun man
ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರ ಗನ್ ಮ್ಯಾನ್ ಗ್ರಾಮದಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಧಾರವಾಡ ತಾಲೂಕಿನ ಯಾದವಾಡ ಗ್ರಾಮಸ್ಥರು ಡಿಸಿ ಅವರ ಗನ್ ಮ್ಯಾನ್ ಪ್ರಕಾಶ ಯಲ್ಲಪ್ಪ ಮಾಳಗಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದರು. ಪ್ರಕಾಶ ಸಹ ಯಾದವಾಡ ಗ್ರಾಮದವರಾಗಿದ್ದು, ಜಿಲ್ಲಾಧಿಕಾರಿಗಳ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಾಶ ಅವರು ಯಾದವಾಡದ ಗ್ರಾಮದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಗನ್ ಮ್ಯಾನ್ ಹುದ್ದೆ ಇರುವುದನ್ನೇ ಲಾಭ ಮಾಡಿಕೊಂಡು ಇತನ ಸಹೋದರರು ಗ್ರಾಮದಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಡಿಸಿ ಹಾಗೂ ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.